ಧಾರ್ಮಿಕ ಸುದ್ದಿಸ್ಥಳೀಯ ಸುದ್ದಿಗಳು

ನ.18ರಂದು ಶ್ರೀ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈಯವರ ಅಭಿನಂದನಾ ಸಮಾರಂಭ

ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರ

Share News

ಬಂಟ್ವಾಳ :ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈಯವರ ಅಭಿನಂದನಾ ಸಮಿತಿ ವತಿಯಿಂದ ಹರಿಕೃಷ್ಣ ಪುನರೂರು ಹಾಗೂ ಬೆಳ್ಳಿಪ್ಪಾಡಿ ರಮಾನಾಥ ರೈ ಯವರ ಮೇಲಿನ ಅಭಿಮಾನ ಹಾಗೂ ನಿಸ್ವಾರ್ಥ ಪ್ರೀತಿಯಿಂದ ನ.18ರಂದು ಮಂಗಳವಾರ ಅಭಿನಂದನಾ ಸಮಾರಂಭವು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅವರು ತಿಳಿಸಿದರು.

ಅವರು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸುಮಾರು 2500ಸಾವಿರಕ್ಕೋ ಅಧಿಕ ಮಂದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ. ಬಳಿಕ ಅಭಿನಂದನಾ ಸಭೆ ನಡೆಯಲಿದ್ದು ಕಾಸರಗೋಡು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ದೀಪೋಜ್ವಲನ ಮಾಡಲಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕಲ್ಕೂರ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಇವರ ಜೊತೆಗೆ ಇನ್ನೂ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
‌‌ಕಾರ್ಯಕ್ರಮಕ್ಕೆ ಆಗಮಿಸಿ ಅಭಿಮಾನಿಗಳಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿದೆ. ಬಳಿಕ “ಶಾಂಭವಿ ವಿಜಯ ” ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ, ಪ್ರಧಾನ ಸಂಚಾಲಕ ಜಗನ್ನಾಥ ಚೌಟ, ಸಮಿತಿ ಪ್ರಮುಖರಾದ ದೇವಪ್ಪ ಕುಲಾಲ್, ಕಿಶೋರ್ ಭಂಡಾರಿ ಬಡಗಬೆಳ್ಳೂರು,ಸೇಸಪ್ಪ ಮಾಸ್ಟರ್, ಜಯರಾಮ ಶೇಖ ಪೀಲ್ಯಡ್ಕ, ವಿಶ್ವನಾಥ ಪೂಜಾರಿ, ಬಿ.ಮಾಹಲಿಂಗ ಭಟ್, ರಾಮಗಣೇಶ್ ಪ್ರಭು ಕೈಕುಂಜೆ, ಅನಾರು ಕೃಷ್ಣ ಶರ್ಮ ಬಿಸಿರೋಡು, ಕಿಶೋರ್ ಇರಂತಬೆಟ್ಟು, ಜಯರಾಮ ಪೂಜಾರಿ, , ಪ್ರಭಾಕರ್ ಶೆಟ್ಟಿ, ಸೀತಾರಾಮ ಶೆಟ್ಟಿ, ಎಚ್ಕೆ ನಯನಾಡು , ಗಿರೀಶ್ ಉಪಸ್ಥಿತರಿದ್ದರು.

✨ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈ ಯವರಿಗೆ ಅಭಿನಂದನಾ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ.

✨ಆಶಿರ್ವಚನ: ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಶ್ರೀ ಎಡನೀರು ಮಠ,ಕಾಸರಗೋಡು.

✨ಮಧ್ಯಾಹ್ನ ಗಂಟೆ 1:30 ರಿಂದ
ಯಕ್ಷಗಾನ ಬಯಲಾಟ “ಶಾಂಭವಿ ವಿಜಯ”

✨ ನೇರ ಪ್ರಸಾರ ನಿಮ್ಮ ನೆಚ್ಚಿನ ಭಕ್ತಿಶ್ರೀ ಟಿವಿ ಯಲ್ಲಿ

✨ ಭಕ್ತಿಶ್ರೀ ಟಿವಿ ಯಲ್ಲಿ ನಿಮ್ಮಊರಿನ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ನೇರ ಪ್ರಸಾರ, ಮುದ್ರಿತ ಪ್ರಸಾರಕ್ಕಾಗಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ – 9945735010, 7676891850


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!